ಮೈಸೂರು : ಸಿದ್ದರಾಮಯ್ಯ ಸೋನಿಯಾ ಗಾಂಧಿ ಗುಲಾಮರಾಗಿದ್ದೀರಿ ಎಂಬ ಶಾಸಕ ಸಿಟಿ ರವಿ ಹೇಳಿಕೆಗೆ ವಿಪಕ್ಷ ನಾಯಕ ಸಿದ್ಧರಾಮಯ್ಯ ತಿರುಗೇಟು ನೀಡಿದ್ದಾರೆ.


COMMERCIAL BREAK
SCROLL TO CONTINUE READING

ಜಿಲ್ಲೆಯ ಟಿ.ನರಸೀಪುರದಲ್ಲಿ ಈ ಕುರಿತು ಪ್ರತಿಕ್ರಿಯೆ ನೀಡಿದ ಸಿದ್ಧರಾಮಯ್ಯ, ಸಂವಿಧಾನ 15 ಭಾಷೆಗಳನ್ನು ಅಧಿಕೃತ ಭಾಷೆಗಳಿಗೆ ಮಾನ್ಯತೆ ನೀಡಿದೆ. ಪ್ರಜಾಪ್ರಭುತ್ವದಲ್ಲಿ ಯಾರು ಯಾರಿಗೂ ಗುಲಾಮರಲ್ಲ. ಅಮಿತ್ ಶಾ ಓಲೈಸಿ ಮಾತನಾಡಿದ್ದಕ್ಕೆ ಸಿಟಿ ರವಿಯನ್ನ ಗುಲಾಮ ಎಂದಿದ್ದು. ಸೋನಿಯಾ ಗಾಂಧಿ ಹಿಂದಿ ರಾಷ್ಟ್ರೀಯ ಭಾಷೆ ಅಂದಿದ್ದಾರಾ? ರಾಹುಲ್ ಗಾಂಧಿ ಆ ರೀತಿ ಮಾತನಾಡಿದ್ದಾರಾ? ಪ್ರಜಾಪ್ರಭುತ್ವದಲ್ಲಿ ಯಾರಿಗೆ ಯಾರೂ ಗುಲಾಮರಲ್ಲ ಎಂದರು.


ಇದನ್ನೂ ಓದಿ : Basanagouda Patil Yatnal : ಕೆಪಿಎಸ್‌ಸಿ ನೇಮಕದಲ್ಲು ಭ್ರಷ್ಟಾಚಾರ : ಹೊಸ ಬಾಂಬ್ ಸಿಡಿಸಿದ ಶಾಸಕ ಯತ್ನಾಳ್‌


ಹಿಂದಿ ಕೂಡ ಒಂದು ಭಾಷೆ.  ಅದು ರಾಷ್ಟ್ರ ಭಾಷೆ ಅಂತ ಎಲ್ಲಿಯೂ ಹೇಳಿಲ್ಲ. ಅಮಿತ್ ಶಾ ಸಂಪರ್ಕ ಭಾಷೆಯಾಗಿ ಬಳಸಬೇಕು ಅಂದಿರುವ ಕಾರಣಕ್ಕಾಗಿ ಬಿಜೆಪಿಯವರು ಓಲೈಕೆ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.


ಪಿಎಸ್ಐ ಪರೀಕ್ಷೆ ರದ್ದು ಸ್ವಾಗತಾರ್ಹ : 


 ಪಿಎಸ್ಐ ಪರೀಕ್ಷೆ ರದ್ದು ಮಾಡಿರುವ ಕುರಿತು ಮಾತನಾಡಿದ ಸಿದ್ಧರಾಮಯ್ಯ, ಬಿಜೆಪಿ ಸರ್ಕಾರ ಮೋಸ್ಟ್ ಕರೆಪ್ಟಿವ್ ಸರ್ಕಾರ. ಸರ್ಕಾರದ ಗಮನಕ್ಕೆ ಬಾರದೆ ಭ್ರಷ್ಟಾಚಾರ ನಡೆಯಲು ಸಾಧ್ಯನಾ? ನನ್ನ ಪ್ರಕಾರ ಗೃಹ ಸಚಿವ ಒನ್ ಸೆಕೆಂಡ್‌ ಕೂಡ ಮುಂದುವರೆಯಬಾರದು. ಅರಗ ಜ್ಞಾನೇಂದ್ರ ರಾಜೀನಾಮೆ ಕೊಡಬೇಕು. ನೈತಿಕತೆ ಇದ್ರೆ ಸಿಎಂ ಬೊಮ್ಮಾಯಿ ರಾಜೀನಾಮೆ ಪಡೆಯಬೇಕು ಎಂದು ಒತ್ತಾಯಿಸಿದರು.


ದಿವ್ಯಾ ಬಂಧನವಾದ ಕೂಡಲೇ ಎಕ್ಸಾಂ ರದ್ದು ವಿಚಾರ, ಬಂಧಿತೆ ದಿವ್ಯಾ ಸತ್ಯ ಹೇಳಲೇಬೇಕಲ್ವಾ. ಬೇರೆ ಯಾರ್ಯಾರು ಇದ್ದಾರೆ, ಯಾರಿಂದ ಲೀಕ್ ಆಯ್ತು ಎಲ್ಲಾ ಗೊತ್ತಾಗಬೇಕಲ್ವ. ಅದಕ್ಕೆ ತನಿಖೆ ಆಗಲೇಬೇಕು ಎಂದರು.


ಇದನ್ನೂ ಓದಿ : 'ವೈಫಲ್ಯಗಳ ಸರದಾರ ಗೃಹ ಸಚಿವ ಆರಗ ಜ್ಞಾನೇಂದ್ರ ಅವರನ್ನು ಸಿಎಂ ತಕ್ಷಣ ಸಂಪುಟದಿಂದ ಕಿತ್ತುಹಾಕಲಿ'


ಪಿಎಸ್‌ಐ ಮರು ಪರೀಕ್ಷೆಗೆ ಸರ್ಕಾರದ ನಿರ್ಧಾರಕ್ಕೆ ಬೆಂಬಲ ಸೂಚಿಸಿದ ಮಾಜಿ ಸಿಎಂ ಸಿದ‍್ಧರಾಮಯ್ಯ, ಪರಿಕ್ಷೆಯಲ್ಲಿ ಯಾರು ಅಕ್ರಮ ಮಾಡಿದ್ದಾರೆ, ಯಾರು ಸರಿಯಾಗಿ ಬರೆದಿದ್ದಾರೆ ಗೊತ್ತಾಗಲ್ಲ. ತನಿಖೆ ಮುಂದುವರಿದು 20 ಜನರ ಬಂಧನ ಆಗಿದೆ. ಈಗಿರುವಾಗ ಮರು ಪರೀಕ್ಷೆ ಮಾಡುವುದು ಸರಿ ಇದೆ.ಆದರೆ ಈಗ ಪರೀಕ್ಷೆ ಬರೆದಿರುವ ಯಾರ ಬಳಿಯೂ ಪರಿಕ್ಷಾ ಶುಲ್ಕ ಪಡೆಯಬಾರದು. ಬಿಜೆಪಿ ದುರಾಡಳಿತದಿಂದ ಇಂತಹ ಘಟನೆಗಳು ಮರುಕಳಿಸುತ್ತಿವೆ. ಗೃಹ ಸಚಿವ ಆರಗ ಜ್ಞಾನೇಂದ್ರ ಒಂದು ಕ್ಷಣವೂ ಪದವಿಯಲ್ಲಿ ಮುಂದುವರಿಯಬಾರದು. ಮುಖ್ಯಮಂತ್ರಿ ಇದರ ಬಗ್ಗೆ ಜವಾಬ್ದಾರಿ ತೆಗೆದುಕೊಳ್ಳಬೇಕು ಎಂದರು.


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.